CHURCH
Nullam dignissim, ante scelerisque the is euismod fermentum odio sem semper the is erat, a feugiat leo urna eget eros. Duis Aenean a imperdiet risus.
ನವೇನ ಪ್ರಾರ್ಥನೆ
ಪ್ರಿಯ ಬಾಲಯೇಸುವೇ, ನಿಮ್ಮ ಕರಗಳು ನಮ್ಮನ್ನು ಸ್ವಾಗತಿಸಲು ಚಾಚಲಾಗಿವೆ. ನಮ್ಮನ್ನು ಆಶೀರ್ವದಿಸಲು ನಮ್ಮ ಮೇಲೆ ಹರಡಲಾಗಿದೆ. ನಿಮ್ಮನ್ನು ಆರಾಧಿಸಿ ಸ್ತುತಿಸುತ್ತಾ ಈ ಸಮಯವನ್ನು ನಿಮ್ಮ ಸನ್ನಿಧಿಯಲ್ಲಿ ಕಳೆಯಲು ಕೃಪೆನೀಡಿರಿ. ನೀವೇ ನಮ್ಮ ಪ್ರಭುವು ಹಾಗು ರಕ್ಷಕರು, ನೀವು ಸದಾ ನಮ್ಮನ್ನು ಪರಿಪಾಲಿಸುತ್ತೀರಿ. ನಮ್ಮನ್ನು ಪರಿಪಾಲಿಸುವುದರಿಂದ ನಮ್ಮ ಪ್ರಾರ್ಥನೆಗಳಿಗೆ ಕಿವಿಗೊಡಲು ನಮ್ಮ ಬಳಿ ಇರುವಿರಿ. ನಿಮ್ಮ ಶ್ರೇಷ್ಠ ಸಹಾಯವನ್ನು ನಮಗೆ ಸದಾ ನೀಡಬೇಕೆಂದು ಪಿತದೇವರೊಂದಿಗೆ ಪವಿತ್ರಾತ್ಮರ ಐಕ್ಯದಲ್ಲಿ ಯುಗಯುಗಾಂತರಕ್ಕೂ ಜೀವಿಸಿ ಆಳುವ ನಿಮ್ಮನ್ನು ದೈನ್ಯದಿಂದ ಪ್ರಾರ್ಥಿಸುತ್ತೇವೆ. ಆಮನ್.
ಅದ್ಭುತಶಾಲಿಯಾದ ಬಾಲಯೇಸುವೇ, ನಾವು ನಿಮ್ಮ ಪ್ರತಿಮೆಯ ಮುಂದೆ ಸಾಷ್ಟಾಂಗವಾಗಿ ಅಡ್ಡಬಿದ್ದು, ನಿಮ್ಮ ಸಹಾಯವನ್ನು ಯಾಚಿಸುತ್ತೇವೆ.
ನೊಂದಿರುವ ನಮ್ಮ ಹೃನ್ಮನಗಳ ಮೇಲೆ ನಿಮ್ಮ ಕೃಪಾಕಟಾಕ್ಷವನ್ನು ಇರಿಸಿರಿ. ಪ್ರೀತಿಮಯ ಹಾಗೂ ಕರುಣಾಭರಿತ ಹೃದಯವುಳ್ಳ ನೀವು ನಮ್ಮ
ದೀನ ಪ್ರಾರ್ಥನೆಗಳೆಂದ ಮನಕರಗಿ ನಾವು ಭಕ್ತಿಯಿಂದ ಕೋರುವ ವರಗಳನ್ನು ದಯಪಾಲಿಸಿರಿ.
(ವೈಯಕ್ತಿಕ ಕೋರಿಕೆಗಳನ್ನು ಇಲ್ಲಿ ನಿವೇದಿಸಬಹುದು)
ನಮಗೆ ಉಂಟಾಗಿರುವ ಅಧೈರ್ಯವನ್ನು ತೊಲಗಿಸಿರಿ, ನಮಗೆ ಬಂದೊದಗಿರುವ ಕಷ್ಟ ಕಾರ್ಪಣ್ಯಗಳನ್ನು ದೂರಮಾಡಿರಿ. ನಿಮ್ಮ ಪವಿತ್ರ
ಬಾಲ್ಯದ ನಿಮಿತ್ತ ನಮ್ಮ ಪ್ರಾರ್ಥನೆಗಳನ್ನು ಆಲಿಸಿ ಉಪಕಾರವನ್ನೂ ಉಪಶಮನವನ್ನೂ ನೀಡಿರಿ. ನಿಮ್ಮ ಸಹಾಯವನ್ನು ಪಡೆದು ಧನ್ಯರಾದ
ನಾವು ಪಿತನೊಂದಿಗೂ ಪವಿತ್ರಾತ್ಮರೊಂದಿಗೂ ಸದಾ ಕಾಲಕ್ಕೂ ನಿಮ್ಮನ್ನು ಸ್ತುತಿಸುವೆವು. ಆಮೆನ್.
ಪ್ರಿಯ ಪುಟ್ಟ ಬಾಲಯೇಸುವೇ, ಪರಲೋಕದ ತಂದೆಯನ್ನು ನಮ್ಮ ತಂದೆಯೆಂದು ಕರೆಯಲು ನಮಗೆ ಬೋಧಿಸಿದ್ದೀರಿ. ಆ ತಂದೆಯ ಮಹಿಮೆಗಾಗಿ ನಿಮ್ಮೊಂದಿಗೆ ನಾವು ಈ ಬಲಿಪೂಜೆಯನ್ನು ಅರ್ಪಿಸುತ್ತೇವೆ. ನಿಮ್ಮೊಂದಿಗೆ ನಮ್ಮೆಲ್ಲರನ್ನು ಆ ಪರಮ ತಂದೆಗೆ ಸುಗಂಧ ಬಲಿ ಕಾಣಿಕೆಯಾಗಿ ಅರ್ಪಿಸುತ್ತೇವೆ. ನಮಗಾಗಿಯೂ ವಿಶ್ವದ ಸರ್ವ ಜನರಿಗಾಗಿಯೂ ಈ ಬಲಿಪೂಜೆಯನ್ನು ಸಮರ್ಪಿಸುತ್ತೇವೆ.
ಪವಿತ್ರ ಯೇಸುಬಾಲರ ಜಪಮಾಲೆಯನ್ನು ಈ ಕೆಳಕಂಡ ರೀತಿಯಲ್ಲಿ ಹೇಳಬೇಕು:
ಪವಿತ್ರ ಕುಟುಂಬದ ಮಹಿಮೆಗಾಗಿ ಪರಲೋಕ ಪ್ರಾರ್ಥನೆ - 3 ಸಲ
ಪವಿತ್ರ ಬಾಲಯೇಸುವಿನ ಹನ್ನೆರಡು ವರ್ಷಗಳ ಜ್ಞಾಪಕಾರ್ಥವಾಗಿ ನಮೋ ಮರಿಯ ಪ್ರಾರ್ಥನೆ - 12 ಸಲ
ಪರಮತ್ರಿತ್ತದ ಸ್ತುತಿಗಾಗಿ ಪಿತನಿಗೂ ಸುತನಿಗೂ - 3 ಸಲ
ಪರಲೋಕ ಪ್ರಾರ್ಥನೆಯನ್ನು ಹೇಳುವುದಕ್ಕೆ ಮೊದಲು ಪ್ರತಿಯೊಂದು ಸಲ “ದೇವರ ವಾರ್ತೆಯಾದವರು ಮನುಷ್ಯರಾದರು ಮತ್ತು ನಮ್ಮೊಡನೆ ವಾಸವಾಗಿದ್ದರು" ಎಂದು ಹೇಳಬೇಕು.
ಪಿತನಿಗೂ ಸುತನಿಗೂ.... ಹೇಳುವುದಕ್ಕೆ ಮೊದಲು "ಪವಿತ್ರ ಯೇಸುಬಾಲರೇ, ನಮ್ಮನ್ನು ಆಶೀರ್ವದಿಸಿ ನಮ್ಮ ಕೋರಿಕೆಗಳನ್ನು ನೆರವೇರಿಸಿರಿ” ಎಂದು ಹೇಳಬೇಕು.
01. ಮನುಷ್ಯಾವತಾರ
02. ಇಲಿಜಬೇತಳಿಗೆ ಇತ್ತ ಭೇಟಿ
03. ಕ್ರಿಸ್ತ ಜಯಂತಿ
04. ಕುರುಬರು ಸಲ್ಲಿಸಿದ ಆರಾಧನೆ
05. ಸುನ್ನತಿ ಆಚರಣೆ
06. ಜ್ಞಾನಿಗಳು ಸಲ್ಲಿಸಿದ ಆರಾಧನೆ
07. ದೇವಾಲಯದಲ್ಲಿ ಸಮರ್ಪಣೆ
08. ಈಜಿಪ್ಟಿಗೆ ಪಲಾಯನ
09. ಈಜಿಪ್ಟಿನಲ್ಲಿ ಅಜ್ಞಾತವಾಸ
10. ನಜರೇತಿಗೆ ಹಿಂತಿರುಗುವಿಕೆ
11. ನಜರೇತಿನಲ್ಲಿ ವಾಸ
12. ಬೋಧಕರ ಮಧ್ಯೆ ಯೇಸು
ನಮೋ ಮರಿಯಾ.....
ನಮೋ ಮರಿಯಾ.....
ನಮೋ ಮರಿಯಾ.....
ನಮೋ ಮರಿಯಾ.....
ನಮೋ ಮರಿಯಾ.....
ನಮೋ ಮರಿಯಾ.....
ನಮೋ ಮರಿಯಾ.....
ನಮೋ ಮರಿಯಾ.....
ನಮೋ ಮರಿಯಾ.....
ನಮೋ ಮರಿಯಾ.....
ನಮೋ ಮರಿಯಾ.....
ನಮೋ ಮರಿಯಾ.....
ಪ್ರಾರ್ಥನೆ: ಪವಿತ್ರ ಯೇಸುಬಾಲರೇ, ನಿಮ್ಮ ಸರ್ವಶಕ್ತಿ ಆಶ್ಚರ್ಯಕರವಾದುದು. ಆಶೀರ್ವದಿಸಲು ಚಾಚಿರುವ ನಿಮ್ಮ ಕೈ ಅದ್ಭುತಕರವಾದುದು.
ಎಲ್ಲಾ ತರಹದ ಕೃಪಾವರಗಳನ್ನು ನಮ್ಮ ಮೇಲೆ ಸುರಿಸಿರಿ. ನಿಮ್ಮಲ್ಲಿ ಭರವಡೆಯಿಟ್ಟು ಪ್ರಾರ್ಥಿಸುವವರಿಗೆ ಕರುಣೆಯಿಂದ ಕಿವಿಗೊಡಿರಿ, ಆಮೆನ್.
ಈ ಭಕ್ತಿಯು ಪವಿತ್ರ ಯೇಸುಬಾಲರಿಗೆ ಎಷ್ಟು ಪ್ರಿಯವಾದದ್ದು ಎಂಬುದನ್ನು ಯೇಸುಬಾಲರೇ ಸಂತ ಮಾರ್ಗರೇಟಮ್ಗಳಿಗೆ ಹೇಳಿದ
ಮಾತುಗಳಿಂದ ವ್ಯಕ್ತವಾಗುತ್ತದೆ. ಈ ಜಪಮಾಲೆಯನ್ನು ಪೂರ್ಣವಿಶ್ವಾಸದಿಂದ ಹೇಳಿ ಅವರ ಪವಿತ್ರ ಬಾಲ್ಯವನ್ನು ಮಹಿಮೆಪಡಿಸುವವರಿಗೆ
ವಿಶಿಷ್ಟ ವರಗಳನ್ನು ಪರಿಪಾಲಿಸುವುದಾಗಿ ವಾಗ್ದಾನ ಮಾಡಿದ್ದಾರೆ. ಎಲ್ಲಕ್ಕಿಂತಲೂ ಮಿಗಿಲಾಗಿ ಪವಿತ್ರ ಯೇಸುಬಾಲರ ಭಕ್ತರಿಗೆ ವಿರಕ್ತತ್ವ
ಹಾಗೂ ಪರಿಶುದ್ಧತೆಯನ್ನು ಕಾಪಾಡುವಂಥ ಕೃಪೆಯನ್ನು ನೀಡುವುದಾಗಿ ಮಾತು ಕೊಟ್ಟಿದ್ದಾರೆ.
ಭಕ್ತಿಯುಳ್ಳ ವಿಶ್ವಾಸಿಗಳೇ, ಮಕ್ಕಳಿಗೆ
ಜ್ಞಾನಸ್ನಾನದಲ್ಲಿ ಇದ್ದಂಥ ನಿಷ್ಕಪಟ ಮನಸ್ಸನ್ನು ಸದಾಕಾಲ ಅವರಲ್ಲಿ ಕಾದಿರಿಸಲು ಬಯಸುವಿರಾ? ಅಚಲ ಭಕ್ತಿಯನ್ನು ಅವರಲ್ಲಿ ಮೂಡಿಸಿರಿ.
ವಿಶ್ವಾಸದಿಂದ ಈ ಜಪಮಾಲೆಯನ್ನು ಹೇಳುವ ಅಭ್ಯಾಸವನ್ನು ಮಾಡಿರಿ. ಪ್ರೀತಿಯಿಂದ ಯೇಸುಬಾಲರ ಬಳಿಗೆ ಅವರನ್ನು ಕರೆತನ್ನಿರಿ.
ಯೇಸುಬಾಲರನ್ನು ಪ್ರೀತಿಸಿ ಅವರನ್ನು ಅನುಕರಿಸುವಂತೆ ಮಾಡಿರಿ.
ಸ್ವಾಮಿ ದಯೆ ತೋರಿ.
ಪ್ರಭೂ ದಯೆ ತೋರಿ.
ಸ್ವಾಮಿ ದಯೆ ತೋರಿ.
ಕ್ರಿಸ್ತರೇ ನಮ್ಮನ್ನು ಆಲಿಸಿರಿ.
ಪರಲೋಕದ ಪಿತ ದೇವರೇ.
ಲೋಕ ರಕ್ಷಕರಾದ ಸುತ ದೇವರೇ.
ಪವಿತ್ರಾತ್ಮ ದೇವರೇ.
ಅದ್ಭುತಶಾಲಿಯಾದ ಯೇಸುಬಾಲರೇ.
ಆಶ್ಚರ್ಯಕರವಾಗಿ ಸರ್ವಶಕ್ತಿಯನ್ನು ಪ್ರದರ್ಶಿಸುವ ಯೇಸು ಬಾಲರೇ.
ನಮ್ಮ ಹೃನ್ಮನಗಳಲ್ಲಿರುವುದನ್ನು ಅರಿತು ನಮ್ಮಲ್ಲಿ ರಾಜ್ಯಭಾರ ನಡೆಸುವಂತಹ ಯೇಸುಬಾಲರೇ.
ನಮಗೆ ಸದಾ ನೆರವಾಗುವಂಥ ಪ್ರೀತಿಯುಳ್ಳ ಯೇಸುಬಾಲರೇ.
ನಾವು ಅಂತಿಮ ಗುರಿಯನ್ನು ಮುಟ್ಟಲು ನಮ್ಮನ್ನು ಸದಾ ಪರಾಂಬರಿಸುವ ಯೇಸುಬಾಲರೇ.
ನಮ್ಮ ಹೃದಯದ ಅಂಧಕಾರವನ್ನು ಸತ್ಯದಿಂದ ಬೆಳಗಿಸುವಂತಹ ಯೇಸುಬಾಲರೇ.
ಬಡವರನ್ನು ಸಕಲ ಐಶ್ವರ್ಯದಿಂದ ಧಾರಾಳವಾಗಿ ತುಂಬಿಸುವ ಯೇಸುಬಾಲರೇ.
ನೊಂದವರನ್ನು ಸ್ನೇಹದಿಂದ ಸಾಂತ್ವನಪಡಿಸುವ ಯೇಸುಬಾಲರೇ.
ನಮ್ಮ ಪಾಪಗಳನ್ನು ಕ್ಷಮಿಸುವ ದಯಾಭರಿತ ಯೇಸುಬಾಲರೇ.
ಇಡೀ ವಿಶ್ವವನ್ನು ನಿಮ್ಮ ಮಹಿಮೆಯಿಂದ ತುಂಬಿರುವ ಯೇಸುಬಾಲರೇ.
ದಯಾಪರರಾಗಿದ್ದು.
ದಯಾಪರರಾಗಿದ್ದು.
ಸಕಲ ಕೇಡುಗಳಿಂದ.
ಸಕಲ ಪಾಪಗಳಿಂದ.
ನಿಮ್ಮ ಮಿತಿಯಿಲ್ಲದ ಒಳಿತಿನಲ್ಲಿ ಅಪನಂಬಿಕೆ ಪಡದಂತೆ.
ಅದ್ಭುತಗಳನ್ನು ಮಾಡುವ ನಿಮ್ಮ ಶಕ್ತಿಯಲ್ಲಿ ಅಪನಂಬಿಕೆ ಪಡದಂತೆ.
ನಿಮ್ಮ ಭಕ್ತಿಯಲ್ಲಿ ತತ್ತಳಿಸದಂತೆ.
ದುಃಖ, ನೋವಿನ ಸಂದರ್ಭಗಳಲ್ಲಿ ನಾವು ಸಿಲುಕದಂತೆ.
ನಿಮ್ಮ ಮಾತೆ ಮರಿಯಮ್ಮನವರ ಹಾಗೂ ನಿಮ್ಮ ಪೋಷಕ ತಂದೆ ಜೋಸೆಫರ ಬಿನ್ನಹೆಗಳ ಮುಖಾಂತರ.
ನಮ್ಮನ್ನು ಕ್ಷಮಿಸಬೇಕೆಂದು.
ಪ್ರಾರ್ಥಿಸುವ ನಮ್ಮನ್ನು ಆಲೈಸಿರಿ.
ನಿಮ್ಮ ಪವಿತ್ರ ಬಾಲ್ಯದ ಬಗ್ಗೆ ಪ್ರೀತಿ ವಿಶ್ವಾಸವನ್ನು ನಮ್ಮಲ್ಲಿ ಕಾದಿರಿಸಿ ಅಧಿಕರಿಸಬೇಕೆಂದು.
ನಿಮ್ಮ ಅದ್ಭುತಕರ ಹಸ್ತವನ್ನು ನಮ್ಮಿಂದ ಹಿಂತೆಗೆಯಬೇಡಿರೆಂದು.
ನಿಮ್ಮ ಲೆಕ್ಕವಿಲ್ಲದ ಕೊಡುಗೆಗಳನ್ನು ನಾವು ಸದಾ ಜ್ಞಾಪಿಸಿಕೊಳ್ಳುವಂತೆ ಮಾಡಿರೆಂದು.
ನಿಮ್ಮ ಪವಿತ್ರ ಹೃದಯವನ್ನು ಹೆಚ್ಚಾಗಿ ಪ್ರೀತಿಸಲು ನಮ್ಮಲ್ಲಿ ನಿಮ್ಮ ಪ್ರೇಮಾಗ್ನಿಯನ್ನು ಉರಿಸಿರೆಂದು.
ನಿಮ್ಮಲ್ಲಿ ನಂಬಿಕೆಯಿಟ್ಟು ಪ್ರಾರ್ಥಿಸುವವರೆಲ್ಲರನ್ನು ದಯೆಯಿಂದ ಆಲಿಸಿರೆಂದು.
ನಮ್ಮ ನಾಡಿಗೆ ಶಾಂತಿಯನ್ನು ಪಾಲಿಸಿರೆಂದು.
ಬರಲಿರುವ ಕೇಡುಗಳಿಂದ ನಮ್ಮನ್ನು ಕಾಪಾಡಿರೆಂದು.
ಧಾರಾಳ ಮನಸ್ಸಿನಿಂದ ಸೇವೆ ಸಲ್ಲಿಸಿದವರಿಗೆ ನಿತ್ಯಜೀವನವನ್ನು ಕರುಣಿಸಿರೆಂದು.
ಅಂತಿಮ ತೀರ್ಪಿನ ಸಮಯದಲ್ಲಿ ನಮಗೆ ದಯಾಭರಿತ ತೀರ್ಪನ್ನು ನೀಡಿರೆಂದು.
ನಿಮ್ಮ ಅದ್ಭುತಕರ ಪ್ರತಿಮೆಯು ನಮ್ಮೆಲ್ಲರಿಗೆ ಉಪಶಮನವನ್ನೀಯುವ ಆಶ್ರಯವಾಗಿರಲೆಂದು.
ದೇವಸುತ, ಮರಿಯಮ್ಮನವರ ಪುತ್ರನಾದ ಯೇಸುವೇ.
ಲೋಕದ ಪಾಪಗಳನ್ನು ಪರಿಹರಿಸುವ ದೇವರ ಕುರಿಮರಿಯೇ.
ಲೋಕದ ಪಾಪಗಳನ್ನು ಪರಿಹರಿಸುವ ದೇವರ ಕುರಿಮರಿಯೇ.
ಲೋಕದ ಪಾಪಗಳನ್ನು ಪರಿಹರಿಸುವ ದೇವರ ಕುರಿಮರಿಯೇ.
ಸ್ವಾಮಿ ದಯೆ ತೋರಿ.
ಪ್ರಭೂ ದಯೆ ತೋರಿ.
ಸ್ವಾಮಿ ದಯೆ ತೋರಿ.
ಕ್ರಿಸ್ತರೇ ನಮ್ಮ ಪ್ರಾರ್ಥನೆಯನ್ನು ದಯೆಯಿಂದ ಆಲಿಸಿರಿ.
ನಮಗೆ ದಯೆ ತೋರಿ
ನಮಗೆ ದಯೆ ತೋರಿ
ನಮಗೆ ದಯೆ ತೋರಿ
ನಮಗೆ ದಯೆ ತೋರಿ
ನಮಗೆ ದಯೆ ತೋರಿ
ನಮಗೆ ದಯೆ ತೋರಿ
ನಮಗೆ ದಯೆ ತೋರಿ
ನಮಗೆ ದಯೆ ತೋರಿ
ನಮಗೆ ದಯೆ ತೋರಿ
ನಮಗೆ ದಯೆ ತೋರಿ
ನಮಗೆ ದಯೆ ತೋರಿ
ನಮಗೆ ದಯೆ ತೋರಿ
ನಮಗೆ ದಯೆ ತೋರಿ
ನಮ್ಮನ್ನು ಕ್ಷಮಿಸಿರಿ ಸ್ವಾಮಿ
ನಮ್ಮ ಪ್ರಾರ್ಥನೆಯನ್ನು ಆಲಿಸಿರಿ ಸ್ವಾಮಿ
ನಮ್ಮನ್ನು ರಕ್ಷಿಸಿರಿ ಯೇಸುವೇ
ನಮ್ಮನ್ನು ರಕ್ಷಿಸಿರಿ ಯೇಸುವೇ
ನಮ್ಮನ್ನು ರಕ್ಷಿಸಿರಿ ಯೇಸುವೇ
ನಮ್ಮನ್ನು ರಕ್ಷಿಸಿರಿ ಯೇಸುವೇ
ನಮ್ಮನ್ನು ರಕ್ಷಿಸಿರಿ ಯೇಸುವೇ
ನಮ್ಮನ್ನು ರಕ್ಷಿಸಿರಿ ಯೇಸುವೇ
ಪ್ರಾರ್ಥಿಸುವ ನಮ್ಮನ್ನು ಆಲೈಸಿರಿ
ಪ್ರಾರ್ಥಿಸುವ ನಮ್ಮನ್ನು ಆಲೈಸಿರಿ
ಪ್ರಾರ್ಥಿಸುವ ನಮ್ಮನ್ನು ಆಲೈಸಿರಿ
ಪ್ರಾರ್ಥಿಸುವ ನಮ್ಮನ್ನು ಆಲೈಸಿರಿ
ಪ್ರಾರ್ಥಿಸುವ ನಮ್ಮನ್ನು ಆಲೈಸಿರಿ
ಪ್ರಾರ್ಥಿಸುವ ನಮ್ಮನ್ನು ಆಲೈಸಿರಿ
ಪ್ರಾರ್ಥಿಸುವ ನಮ್ಮನ್ನು ಆಲೈಸಿರಿ
ಪ್ರಾರ್ಥಿಸುವ ನಮ್ಮನ್ನು ಆಲೈಸಿರಿ
ಪ್ರಾರ್ಥಿಸುವ ನಮ್ಮನ್ನು ಆಲೈಸಿರಿ
ಪ್ರಾರ್ಥಿಸುವ ನಮ್ಮನ್ನು ಆಲೈಸಿರಿ
ಪ್ರಾರ್ಥಿಸುವ ನಮ್ಮನ್ನು ಆಲೈಸಿರಿ
ಪ್ರಾರ್ಥಿಸುವ ನಮ್ಮನ್ನು ಆಲೈಸಿರಿ
ಪ್ರಾರ್ಥಿಸುವ ನಮ್ಮನ್ನು ಆಲೈಸಿರಿ
ಪ್ರಾರ್ಥಿಸುವ ನಮ್ಮನ್ನು ಆಲೈಸಿರಿ
ನಮ್ಮ ಪಾಪಗಳನ್ನು ಕ್ಷಮಿಸಿರಿ ಯೇಸುವೇ
ನಮ್ಮ ಪ್ರಾರ್ಥನೆಯನ್ನು ಆಲೈಸಿರಿ ಯೇಸುವೇ
ನಮಗೆ ದಯೆತೋರಿ ಯೇಸುವೇ
ಪ್ರಾರ್ಥಿಸೋಣ:
ಅದ್ಭುತಶಾಲಿಯಾದ ಬಾಲಯೇಸುವೇ, ನಾವು ನಿಮ್ಮ ಪ್ರತಿಮೆಯ ಮುಂದೆ ಸಾಷ್ಟಾಂಗವಾಗಿ ಅಡ್ಡಬಿದ್ದು,
ನಿಮ್ಮ ಸಹಾಯವನ್ನು ಯಾಚಿಸುತ್ತೇವೆ. ನೊಂದಿರುವ ನಮ್ಮ ಹೃನ್ಮನಗಳ ಮೇಲೆ ನಿಮ್ಮ ಕೃಪಾಕಟಾಕ್ಷವನ್ನು ಇರಿಸಿರಿ. ಪ್ರೀತಿಮಯ
ಹಾಗೂ ಕರುಣಾಭರಿತ ಹೃದಯವುಳ್ಳ ನೀವು ನಮ್ಮ ದೀನ ಪ್ರಾರ್ಥನೆಗಳೆಂದ ಮನಕರಗಿ ನಾವು ಭಕ್ತಿಯಿಂದ ಕೋರುವ ವರಗಳನ್ನು ದಯಪಾಲಿಸಿರಿ
(ವೈಯಕ್ತಿಕ ಕೋರಿಕೆಗಳನ್ನು ಇಲ್ಲಿ ನಿವೇದಿಸಬಹುದು)
ನಮಗೆ ಉಂಟಾಗಿರುವ ಅಧೈರ್ಯವನ್ನು ತೊಲಗಿಸಿರಿ, ನಮಗೆ ಬಂದೊದಗಿರುವ ಕಷ್ಟ ಕಾರ್ಪಣ್ಯಗಳನ್ನು ದೂರಮಾಡಿರಿ. ನಿಮ್ಮ ಪವಿತ್ರ ಬಾಲ್ಯದ
ನಿಮಿತ್ತ ನಮ್ಮ ಪ್ರಾರ್ಥನೆಗಳನ್ನು ಆಲಿಸಿ ಉಪಕಾರವನ್ನೂ ಉಪಶಮನವನ್ನೂ ನೀಡಿರಿ. ನಿಮ್ಮ ಸಹಾಯವನ್ನು ಪಡೆದು ಧನ್ಯರಾದ ನಾವು
ಪಿತನೊಂದಿಗೂ ಪವಿತ್ರಾತ್ಮರೊಂದಿಗೂ ಸದಾ ಕಾಲಕ್ಕೂ ನಿಮ್ಮನ್ನು ಸ್ತುತಿಸುವೆವು. ಆಮೆನ್.
ದಯಾಭರಿತ ಬಾಲಯೇಸುವೇ, ನಿಮ್ಮ ಮುಂದೆ ಮೊಣಕಾಲೂರಿ, ನನ್ನ ಮೇಲೆ ನೀವು ಸುರಿಸಿದ ಕೃಪಾವರಗಳಿಗಾಗಿ ಮನಃಪೂರ್ವಕವಾಗಿ ವಂದನೆಗಳನ್ನು ಸಲ್ಲಿಸುತ್ತೇನೆ. ನಿಮ್ಮ ಕರುಣೆಯನ್ನು ಯಾವಾಗಲೂ ಸ್ಮರಿಸಿಕೊಂಡು, ನೀವೇ ನನ್ನ ದೇವರು, ನೀವೇ ನನ್ನ ಸಹಾಯಕರು, ನೀವೇ ನನ್ನ ಆಶ್ರಯದಾತರು ಎಂದು ನಿವೇದಿಸುತ್ತೇನೆ. ನಿಮ್ಮ ದಯೆ ಹಾಗೂ ಅಪರಿಮಿತ ಕೊಡುಗೆಗಳನ್ನು ಎಲ್ಲೆಲ್ಲೂ ಸಾರುತ್ತೇನೆ. ನಿಮ್ಮ ಅಪಾರ ಪ್ರೀತಿ, ಪರಾಮರಿಕೆ ಸರ್ವರಿಗೂ ತಿಳಿಯುವಂತಾಗಲಿ. ನಿಮ್ಮ ಬಾಲ್ಯದ ಭಕ್ತಿ, ಮಾನವ ಕೋಟಿಯ ಹೃನ್ಮನಗಳಲ್ಲಿ ಆಳವಾಗಿ ಬೇರೂರಲಿ. ನಿಮ್ಮ ಸಹಾಯವನ್ನು ಪಡೆದವರೆಲ್ಲರೂ ನಿಮ್ಮ ಪವಿತ್ರ ಬಾಲ್ಯಕ್ಕೆ ಪ್ರಣಾಮಗಳನ್ನು ಸಲ್ಲಿಸಿ, ನಿಮ್ಮನ್ನು ಸದಾಕಾಲಕ್ಕೂ ಸ್ತುತಿಸಿ ಮಹಿಮೆಪಡಿಸಲಿ. ಆಮೆನ್.
ಪ್ರಿಯ ಬಾಲಯೇಸುವೇ, ನಾನು ನಿಮ್ಮನ್ನು ಆರಾಧಿಸುತ್ತೇನೆ. ನನ್ನ ಮೇಲಿನ ಪ್ರೀತಿಯ ಸಲುವಾಗಿ ಒಂದು ಮಗುವಾಗಿ ಜನಿಸಿದಿರಿ. ನಿಮ್ಮ ಉನ್ನತ ಈ ಪ್ರೀತಿಗಾಗಿ ನಿಮ್ಮನ್ನು ಸ್ತುತಿಸುತ್ತೇನೆ; ನಿಮ್ಮ ಪವಿತ್ರ ರಹಸ್ಯಗಳನ್ನು ಸನ್ಮಾನಿಸುತ್ತೇನೆ. ನಿಮ್ಮ ಪ್ರೀತಿಗೆ ಬದಲಾಗಿ ನಾನು ನನ್ನನ್ನೇ ಸಂಪೂರ್ಣವಾಗಿ ನಿಮಗೆ ಅರ್ಪಿಸುತ್ತೇನೆ. ನಿಮ್ಮ ಪವಿತ್ರ ಬಾಲ್ಯದ ಸದ್ಗುಣಗಳನ್ನು ನನಗೂ ದಯಪಾಲಿಸಬೇಕೆಂದು ವಿನಂತಿಸುತ್ತೇನೆ. ಪ್ರಿಯ ಯೇಸುವೇ, ದೀನತೆಯಿಂದ ನಿಮ್ಮ ಔದಾರ್ಯವನ್ನೂ, ಪ್ರೀತಿಯೆಂಬ ಮಾಧುರ್ಯವನ್ನೂ ನನಗೆ ದಯಪಾಲಿಸಿರಿ. ನಿಮ್ಮ ವಿನಯ ಹಾಗೂ ಸರಳ ಸ್ವಭಾವವನ್ನು ನಾನು ಅನುಕರಿಸುವಂತೆ ಮಾಡಿರಿ. ನಿಮ್ಮನ್ನು ಪ್ರೀತಿಯಿಂದ ಅನುಕರಿಸಿ ನಿಮ್ಮ ಮಹೋನ್ನತ ಸನ್ನಿಧಿಯನ್ನು ಸೇರುವಂತೆ ಮಾಡಿರಿ. ಆಮೆನ್
ಪ್ರಿಯ ಯೇಸುವೇ, ಮಾನವನ ಹೃದಯದಲ್ಲಿ ನೆಲೆಸಿ ಅಪಾರ ಕೃಪಾವರಗಳನ್ನು ಅವನ ಮೇಲೆ ಸುರಿಸುವುದೇ ನಿಮಗೆ ಪರಮಾನಂದವಾಗಿದೆ. ನಿಮ್ಮಲ್ಲಿ ನಂಬಿಕೆಯಿಟ್ಟವರೆಲ್ಲರೂ ವಿಶೇಷ ವರಗಳನ್ನು ಪಡೆದಿದ್ದಾರೆ. ಅವರ ಪ್ರಾರ್ಥನೆಯ ಫಲವನ್ನು ಸವಿಯುತ್ತಿದ್ದಾರೆ. ನಿಮ್ಮ ಅದ್ಭುತಕರ ಪ್ರತಿಮೆಯ ಮುಂದೆ ಮೊಣಕಾಲೂರಿ, ಬಿಚ್ಚುಮನಸ್ಸಿನಿಂದ ನನ್ನ ಕೋರಿಕೆಗಳನ್ನು, ಆಶೆ-ಆಕಾಂಕ್ಷೆಗಳನ್ನು ನಿಮ್ಮ ಮುಂದೆ ಇಡುತ್ತೇನೆ. ವಿಶೇಷವಾಗಿ ಈ ವರಗಳನ್ನು ಕರುಣಿಸಬೇಕೆಂಬುದೇ ನನ್ನ ಇಚ್ಚೆಯಾಗಿದೆ. ನಿಮ್ಮ ಚಿತ್ತದ ಪ್ರಕಾರ ನನ್ನನ್ನು ನಡೆಸಿರಿ. ನಿಮ್ಮ ಪರಮಜ್ಞಾನ, ನಿಮ್ಮ ಅಪಾರ ಪ್ರೀತಿ ನನಗೆ ಒಳಿತನ್ನೇ ಕರುಣಿಸುವುದೆಂಬ ನಂಬಿಕೆ ನನಗಿದೆ. ಈ ಕಷ್ಟದಲ್ಲಿ ನನಗೆ ನೆರವಾಗಿದ್ದು ನನ್ನನ್ನು ಚೇತನಗೊಳಿಸಬೇಕೆಂದು ನಿಮ್ಮನ್ನು ದೈನ್ಯದಿಂದ ವಿನಂತಿಸುತ್ತೇನೆ.
ಕರುಣಾಭರಿತ ಯೇಸುಬಾಲರೇ, ವ್ಯಾಧಿಸ್ತರ ಮೇಲೆ ನೀವು ಕರುಣೆ ತೋರುತ್ತೀರೆಂದು ನಾನು ನಂಬಿದ್ದೇನೆ. ಇಹಲೋಕದಲ್ಲಿರುವಾಗ ನಿಮ್ಮ
ಮಾಧುರ್ಯ ಸ್ಪರ್ಶದಿಂದ ಅಸಾಧ್ಯವೆನಿಸಿದ ಎಲ್ಲಾ ತರಹದ ರೋಗಗಳಿಂದ ಬಳಲುತ್ತಿದ್ದವರನ್ನು ಗುಣಪಡಿಸಿದಿರಿ. ವಿವೇಕ ನಗರಕ್ಕೆ ಬಂದು
ನಿಮ್ಮ ಅದ್ಭುತಕರ ಪ್ರತಿಮೆಯನ್ನು ಕಂಡು ಹಿಂತಿರುಗುವ ಸಾವಿರಾರು ಭಕ್ತಾದಿಗಳು ತೀವ್ರ ಯಾತನೆಯಿಂದಲೂ ಬಾಧೆಗಳಿಂದಲೂ ಬಿಡುಗಡೆ ಹೊಂದಿ
ಸ್ವಸ್ಥರಾಗಿದ್ದಾರೆ. ಪಾಪಿಯಾದ ನನಗೆ ಈ ಬಾಧೆಯು ಪ್ರಾಪ್ತಿಯಾಗಿರುವುದು ನ್ಯಾಯವೇ ಸರಿ. ನಿಮ್ಮ ಸಹಾಯವನ್ನು ಕೇಳಲು ಯಾವ ಹಕ್ಕೂ ನನಗಿಲ್ಲ.
ಆದರೆ ನಿಮ್ಮ ಪವಿತ್ರ ಬಾಲ್ಯದ ನಿಮಿತ್ತ ಕಡುಪಾಪಿಗಳಿಗೂ ಸಹ ನೀವು ಕರುಣಿಸಿದ ಸ್ವಸ್ಥತೆಯನ್ನು ಕಂಡಿರುವುದರಿಂದ ನೀವು ನನಗೆ ಖಂಡಿತವಾಗಿ
ಕರುಣೆ ತೋರುವಿರೆಂದು ನಂಬುತ್ತೇನೆ. ಓ ದಿವ್ಯ ವೈದ್ಯರಾದ ಯೇಸುವೇ,
(ಕಾಯಿಲೆಯನ್ನು ನಿವೇದಿಸಬಹುದು)
ನಾನು ಈ ಕಾಯಿಲೆಯಿಂದ ಗುಣಮುಖನಾಗಬೇಕೆಂದು ನಿಮಗೆ ಚಿತ್ತವಿದ್ದರೆ, ನಿಮ್ಮ ಅಮೃತ ಹಸ್ತವನ್ನು ಚಾಚಿ ನನಗೆ ಸಹಾಯ ಮಾಡಿರಿ.
ನನ್ನ ಯಾತನೆಯನ್ನು ನೀಗಿಸಿ ಸಕಲ ರೋಗ-ರುಜಿನಗಳಿಂದ ನನ್ನನ್ನು ಬಿಡುಗಡೆ ಮಾಡಿರಿ. ಆದರೆ, ನಿಮ್ಮ ಅಗಾಧ ಜ್ಞಾನದ ಸಲುವಾಗಿ ನಾನು ಈ
ಕಾಯಿಲೆಯಿಂದ ಸಹಿಸಬೇಕೆಂದು ನಿಮ್ಮ ಚಿತ್ತವಾದರೆ ನನ್ನ ಆತ್ಮವನ್ನಾದರೂ ಕರುಣೆಯಿಂದ ಗುಣಪಡಿಸಿರಿ. ನನ್ನ ಬಾಧೆಗಳನ್ನು ಸಹನೆಯಿಂದ
ತಾಳಿಕೊಳ್ಳಲು ನಿಮ್ಮ ಉಪಶಮನದ ಕಾಂತಿಯು ನನ್ನನ್ನು ಆದರಿಸಲಿ. ದೈಹಿಕ ಯಾತನೆಗಳೆಲ್ಲವೂ ಕ್ಷಣಿಕವಾದುದೆಂಬುದನ್ನು ನಾನು ಮನಗಾಣುವಂತಾಗಲಿ.
ಓ ದಯಾಮಯ ಯೇಸುಬಾಲರೇ, ನಿಮ್ಮ ಚಿತ್ರಕ್ಕೆ
ಅನುಸಾರವಾಗಿ ಎಲ್ಲವನ್ನೂ ಶಾಂತಿಯಿಂದ ಸಹಿಸಿಕೊಳ್ಳಲು ಕೃಪೆ ನೀಡಿರಿ. ನನ್ನ ಅಲ್ಪ ಯಾತನೆಯಲ್ಲಿ ಘೋರ ಯಾತನೆಯನ್ನು ಸಹಿಸಿದ ನಿಮ್ಮನ್ನು
ಹೋಲುವಂತೆ ಮಾಡಿರಿ. ನನಗೆ ನಿತ್ಯ ಜೀವನವು ದೊರಕುವವರೆಗೂ ಶಯನದಲ್ಲಿ ನಿಮ್ಮ ಪರಾಮರಿಕೆಯನ್ನು ನಾನು ಸ್ತುತಿಸುವಂತಾಗಲಿ. ಆಮೆನ್.
ಪವಿತ್ರ ಬಾಲಯೇಸುವೇ, ನೀವು ಪರಮ ಪ್ರಸಾದದ ಭಕ್ತಿಯಾದ ಸಂತ ಮಾರ್ಗರೀತಮ್ಗಳಿಗೆ ಹೇಳಿದ ಮಾತುಗಳನ್ನು ಸ್ಮರಿಸಿಕೊಳ್ಳಿರಿ.
ಜೀವನದ ಹೊರೆಯಿಂದ ಕುಗ್ಗಿ ಕಂಗಾಲಾಗಿರುವ ಮಾನವ ಕೋಟೆಗೆ “ಈ ಪವಿತ್ರ ಹೃದಯದಿಂದ ನಿಮಗೆ ಬೇಕಾದುದನ್ನು ಪಡೆಯಿರಿ.
ನನ್ನ ಬಾಲ್ಯದ ಪುಣ್ಯಫಲಗಳ ನಿಮಿತ್ತ ನಿಮಗೆ ಯಾವುದೂ ನಿರಾಕರಿಸಲ್ಪಡುವುದಿಲ್ಲ” ಎಂಬ ಉಪಶಮನವನ್ನೀಯುವ ನಿಮ್ಮ ಅಭಯದ
ವಚನವನ್ನು ಸ್ಮರಿಸಿಕೊಳ್ಳಿರಿ. ಓ ಯೇಸುವೇ, ಪರಮ ಸತ್ಯವಾಗಿರುವ ನಿಮ್ಮಲ್ಲಿ ಪೂರ್ಣ ನಂಬಿಕೆಯನ್ನಿಟ್ಟು ನಿಮ್ಮ ಚಿಂತಾಜನಕ ಸ್ಥಿತಿಯನ್ನು
ಕುರಿತು ಹೇಳಲು ನಿಮ್ಮ ಬಳಿಗೆ ಬಂದಿರುತ್ತೇನೆ. ನಿತ್ಯ ಆನಂದ ಪಡೆಯಲು ಯೋಗ್ಯರಾಗಲು ನಾವು ಪುಣ್ಯ ಮಾರ್ಗದಲ್ಲಿ ನಡೆಯುವಂತೆ ಮಾಡಿರಿ.
ನಿಮ್ಮ ಮನುಷ್ಯಾವತಾರ ಮತ್ತು ಪವಿತ್ರ ಬಾಲ್ಯದ ನಿಮಿತ್ತ ನಮಗೆ ಅತೀ ಅವಶ್ಯವಾಗಿರುವ ಕೃಪಾವರಗಳನ್ನುಕರುಣಿಸಿರಿ
ನಾವು ಅಪನಂಬಿಕೆಪಟ್ಟು ಎಂದೂ ಆಶಾಭಂಗವಾಗುವಂತಿಲ್ಲ. ಏಕೆಂದರೆ ನಾವು ನಿಮ್ಮ ಕರಗಳಲ್ಲಿ ನಮ್ಮ ಸರ್ವಸ್ವವನ್ನೂ ಅರ್ಪಿಸುತ್ತೇವೆ.
ಸರ್ವಶಕ್ತ ದೇವರೇ, ನೀವು ಮಾಡಿದ ವಾಗ್ದಾನದ ನಿಮಿತ್ತ ನಮ್ಮ ದೀನ ಕೋರಿಕೆಗಳನ್ನು ಆಲಿಸಿ ಅವುಗಳನ್ನು ನೆರವೇರಿಸಿಕೊಡಿರಿ. ಆಮೆನ್.
ಪ್ರತಿ 9 ಗಂಟೆಗಳವರೆಗೆ ಗಂಟೆಗೊಂದು ಸಾರಿ ಹೇಳತಕ್ಕದ್ದು
ಯೇಸುವೇ, “ಕೇಳಿರಿ ಕೊಡಲಾಗುವುದು, ಹುಡುಕಿರಿ ಸಿಗುವುದು, ತಟ್ಟಿರಿ ತೆರೆಯಲಾಗುವುದು" ಎಂದು ಹೇಳಿದ್ದೀರಿ. ನಿಮ್ಮ ಮಾತೆ ಪರಿಶುದ್ಧ ಮರಿಯಮ್ಮನವರ ಮುಖಾಂತರ ಕೇಳುತ್ತಾ, ಹುಡುಕುತ್ತಾ, ತಟ್ಟುತ್ತಾ ನಿಮ್ಮಲ್ಲಿಗೆ ಬಂದಿರುತ್ತೇನೆ.
ಯೇಸುವೇ “ನನ್ನ ಹೆಸರಿನಲ್ಲಿ ನೀವು ಏನನ್ನು ಕೇಳಿದರೂ ನನ್ನ ತಂದೆಯು ಅದನ್ನು ದಯಪಾಲಿಸುವರು" ಎಂದು ಹೇಳಿದ ಕರ್ತರು ನೀವೇ.
ನಿಮ್ಮ ಮಾತೆ ಪರಿಶುದ್ಧ ಮರಿಯಮ್ಮನವರ ಮುಖಾಂತರ ನನ್ನ ಕೋರಿಕೆಯನ್ನು ನಿಮ್ಮ ತಂದೆಯಾದ ದೇವರಿಗೆ ಒಪ್ಪಿಸುವಂತೆ ವಿನಯದಿಂದ ಬೇಡಿಕೊಳ್ಳುತ್ತೇನೆ.
ಯೇಸುವೇ, "ಭೂಮಿ ಆಕಾಶವು ಅಳಿದು ಹೋಗುವುದು, ಆದರೆ ನನ್ನ ವಾಕ್ಯವು ಅಳಿಯಲಾರದು" ಎಂದು ನುಡಿದ ಯೇಸುವೇ, ನಿಮ್ಮ ಮಾತೆ ಮರಿಯಮ್ಮನವರ ಬಿನ್ನಹಗಳಿಂದ ನನ್ನ ಪ್ರಾರ್ಥನೆ ಈಡೇರುವುದೆಂದು ದೃಢವಾಗಿ ನಂಬುತ್ತೇನೆ.