CHURCH
Nullam dignissim, ante scelerisque the is euismod fermentum odio sem semper the is erat, a feugiat leo urna eget eros. Duis Aenean a imperdiet risus.
ವಿವೇಕನಗರದ ಬಾಲಯೇಸು ಪುಣ್ಯಕ್ಷೇತ್ರ
ಬೆಂಗಳೂರಿನ ಅವಿಭಜಿತ ಪವಿತ್ರಹೃದಯ ಧರ್ಮಕೇಂದ್ರ ಬಹಳ ವಿಶಾಲವಾಗಿದ್ದು, ಸೊಣ್ಣನಹಳ್ಳಿ (ವಿವೇಕನಗರ), ವಣ್ಣಾರ್ಪೇಟೆ, ನೀಲಸಂದ್ರ, ಆಸ್ಟಿನ್ನಗರ ಬಡಾವಣೆ,
ಆನೆಪಾಳ್ಯ ಬಡಾವಣೆ, ಈಜಿಪುರ ಮುಂತಾದ ಅನೇಕ ಸ್ಥಳಗಳನ್ನು ಮತ್ತು ಬಡಾವಣೆಗಳನ್ನು ಒಳಗೊಂಡಿತ್ತು. ಇಷ್ಟು ವಿಶಾಲವಾದ ಧರ್ಮಕೇಂದ್ರವನ್ನು ವಿಂಗಡಿಸಿದರೆ
ಜನತೆಗೆ ಸೌಕರ್ಯಗಳನ್ನು ನೀಡುವುದರ ಜೊತೆಗೆ ಧರ್ಮಕೇಂದ್ರದ ಗುರುಗಳಿಗೆ ಕಾರ್ಯನಿರ್ವಹಣೆಯೂ ಸುಲಭವಾಗುವುದೆಂದು ತಿಳಿದು, ಆಗಿನ ಧರ್ಮಕೇಂದ್ರದ ಗುರುಗಳಾಗಿದ್ದ
ಫಾದರ್ ಪೌಲ್ ಕಿನಾತ್ತುಕರ ಎಂಬುವವರು ಹೊಸ ಧರ್ಮಕೇಂದ್ರಕ್ಕಾಗಿ ಸ್ಥಳವನ್ನು ಹುಡುಕಲಾರಂಭಿಸಿದರು. ಬಹಳ ಕಾಲ ಅವರ ಪ್ರಯತ್ನ ಸಫಲವಾಗಲಿಲ್ಲ.
ಆಗ ತಮ್ಮ ಸ್ನೇಹಿತ ಗುರುವೊಬ್ಬರ ಸಲಹೆಯಂತೆ ಪ್ರಾಗ್ನ ಬಾಲಯೇಸುವಿನಲ್ಲಿ ಭಕ್ತಿಯಿಂದ ಪ್ರಾರ್ಥಿಸಲು ಆರಂಭಿಸಿದರು. ಬೇಗನೇ, ಅವರ ಪ್ರಾರ್ಥನೆಗೆ ಫಲವೆಂಬಂತೆ,
1969ರಲ್ಲಿ ಸೊಣ್ಣನಹಳ್ಳಿಯಲ್ಲಿ (ಈಗಿನ ವಿವೇಕನಗರ) ಸುಮಾರು ನಾಲ್ಕೂವರೆ ಎಕರೆಯಷ್ಟು (ಸುಮಾರು 1,96,000 ಚದರ ಅಡಿ) ಸುಂದರವಾದ ಬೇಸಾಯದ
ಜಮೀನನ್ನು ಬಾಲಯೇಸುವೇ ಅನುಗ್ರಹಿಸಿದರು. ಆಗಿನ ಮಹಾಧರ್ಮಾಧ್ಯಕ್ಷರಾಗಿದ್ದ ಅತೀ ವಂದನೀಯ ಲೂರ್ದುಸ್ವಾಮಿಯವರು 1969ರ ಏಪ್ರಿಲ್ 8ರಂದು ಹೊಸ
ಧರ್ಮಕೇಂದ್ರದ ಕಟ್ಟಡವನ್ನು ಕಟ್ಟಲು ಶಂಕುಸ್ಥಾಪನೆಯನ್ನು ನೆರವೇರಿಸಿದರು.
ತದನಂತರ ಬಂದ ಧರ್ಮಕೇಂದ್ರದ ಗುರುಗಳಾದ ಭಾ। ಜ್ಞಾನಪ್ರಕಾಶ್ರವರು ಸುಮಾರು ಎಂಟು ತಿಂಗಳುಗಳ ಕಾಲ ವಿವೇಕನಗರದ ಕಾರ್ಪೋರೇಷನ್ ಶಾಲೆಯ ಮೈದಾನದಲ್ಲಿ
ಭಾನುವಾರಗಳಂದು ಬಲಿಪೂಜೆಯನ್ನು ಅರ್ಪಿಸಲು ಅನುಮತಿಯನ್ನು ಪಡೆದರು. ಇದರಿಂದಾಗಿ ಸುತ್ತಮುತ್ತಲ ಕ್ರೈಸ್ತಭಕ್ತರಿಗೆ ತುಂಬಾ ಅನುಕೂಲವಾಗಿ ಅವರೆಲ್ಲರೂ
ಭಕ್ತಿಯಿಂದ ಪೂಜೆಗಳಲ್ಲಿ ಹಾಗೂ ಇತರ ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿಯಿಂದ ಭಾಗವಹಿಸುವಂತಾಯಿತು. 1971ರ ಮೇ ತಿಂಗಳಿನಲ್ಲಿ ಫಾ|| ಎಲ್. ಪೀಟರ್ರವರನ್ನು
ಈ ನವ ಧರ್ಮಕೇಂದ್ರದ ಮೊದಲ ಗುರುಗಳನ್ನಾಗಿ ನೇಮಿಸಲಾಯಿತು. ಇವರು ಒಂದು ಗುಡಿಸಲನ್ನು ಕಟ್ಟಿ ಪವಿತ್ರ ಬಾಲಯೇಸುವಿನ ಪ್ರತಿಮೆಯನ್ನು ಸೇಕ್ರೆಡ್ ಹಾರ್ಟ್
ದೇವಾಲಯದಿಂದ ತಂದು ಈ ಗುಡಿಸಲಿನಲ್ಲಿಟ್ಟು ಪೂಜೆಯನ್ನು ಮಾಡಲಾರಂಭಿಸಿದರು. ಮುಂದಿನ ಎಂಟು ವರ್ಷಗಳವರೆಗೆ
ಈ 'ಟೆಂಟ್ ದೇವಾಲಯ'ವೇ ಭಕ್ತಾದಿಗಳಿಗೆ ಪ್ರಾರ್ಥನಾಲಯವಾಯಿತು.
ಈ ಗುಡಿಸಲು ಇದ್ದ ಸ್ಥಳಕ್ಕೆ 'ಗುಲಾಬಿವನ' (ರೋಸ್ಗಾರ್ಡನ್) ಎಂಬುದಾಗಿತ್ತು. ಸುತ್ತಲೂ ಹಚ್ಚಹಸಿರಿನ ಗಿಡಮರಗಳು, ನಾಗರಹಾವಿನಂತಹ ವಿಷಪೂರಿತ ಹಾವುಗಳ ಕಾಟ,
ರಾತ್ರಿಗಳಲ್ಲಿ ವಿದ್ಯುದ್ದೀಪಗಳಿಲ್ಲದ ಬೀದಿಗಳು, ಮಳೆಗಾಲದಲ್ಲಿ ನೀರು ತುಂಬಿ ಕೆಸರಿನ ಗದ್ದೆಯಂತಿದ್ದ ನೆಲ, ರಸ್ತೆಗಳು ಯಾವುದೂ ಭಕ್ತರ ಆರಾಧನೆಗೆ ಅಡಚಣೆಯಾಗಲಿಲ್ಲ;
ಮಳೆ, ಗಾಳಿ, ಚಳಿ, ಸೆಕೆ, ಯಾವುದೂ ಯಾರಿಗೂ ಅಡ್ಡಿಯಾಗಲಿಲ್ಲ. ಮರುಭೂಮಿಯಲ್ಲಿ ನೀರಿನ ಒರತೆಗೆ ಮುಗಿಬಿದ್ದಂತೆ, ಪುಣ್ಯಕ್ಷೇತ್ರಕ್ಕೆ ನೂರಾರು ಭಕ್ತರು
ಬಂದುಹೋಗಲು ಆರಂಭಿಸಿದರು. 1972ರಲ್ಲಿ ಅಂದಿನ ಮಹಾಧರ್ಮಾಧ್ಯಕ್ಷರಾದ ವಂದನೀಯ ಪಿ. ಆರೋಗ್ಯಸ್ವಾಮಿಯವರು ಪವಿತ್ರ ಬಾಲಯೇಸುವಿನ
ಧರ್ಮಕೇಂದ್ರವೆಂದು ಅಧಿಕೃತವಾಗಿ ಘೋಷಿಸಿದರು.
ಬಾಲಯೇಸುವಿನ ಪ್ರತಿಮೆಯ ಮಂಟಪ
ಈ ಗುಡಿಸಲು ಇದ್ದ ಸ್ಥಳಕ್ಕೆ 'ಗುಲಾಬಿವನ' (ರೋಸ್ಗಾರ್ಡನ್) ಎಂಬುದಾಗಿತ್ತು. ಸುತ್ತಲೂ ಹಚ್ಚಹಸಿರಿನ ಗಿಡಮರಗಳು, ನಾಗರಹಾವಿನಂತಹ ವಿಷಪೂರಿತ
ಹಾವುಗಳ ಕಾಟ, ರಾತ್ರಿಗಳಲ್ಲಿ ವಿದ್ಯುದ್ದೀಪಗಳಿಲ್ಲದ ಬೀದಿಗಳು, ಮಳೆಗಾಲದಲ್ಲಿ ನೀರು ತುಂಬಿ ಕೆಸರಿನ ಗದ್ದೆಯಂತಿದ್ದ ನೆಲ, ರಸ್ತೆಗಳು ಯಾವುದೂ ಭಕ್ತರ
ಆರಾಧನೆಗೆ ಅಡಚಣೆಯಾಗಲಿಲ್ಲ; ಮಳೆ, ಗಾಳಿ, ಚಳಿ, ಸೆಕೆ, ಯಾವುದೂ ಯಾರಿಗೂ ಅಡ್ಡಿಯಾಗಲಿಲ್ಲ. ಮರುಭೂಮಿಯಲ್ಲಿ ನೀರಿನ ಒರತೆಗೆ ಮುಗಿಬಿದ್ದಂತೆ,
ಪುಣ್ಯಕ್ಷೇತ್ರಕ್ಕೆ ನೂರಾರು ಭಕ್ತರು ಬಂದುಹೋಗಲು ಆರಂಭಿಸಿದರು. 1972ರಲ್ಲಿ ಅಂದಿನ ಮಹಾಧರ್ಮಾಧ್ಯಕ್ಷರಾದ ವಂದನೀಯ ಪಿ. ಆರೋಗ್ಯಸ್ವಾಮಿಯವರು ಪವಿತ್ರ
ಬಾಲಯೇಸುವಿನ ಧರ್ಮಕೇಂದ್ರವೆಂದು ಅಧಿಕೃತವಾಗಿ ಘೋಷಿಸಿದರು. 1974ರಲ್ಲಿ ಹೊಸದೇವಾಲಯವನ್ನು ಕಟ್ಟಲು ನಕಾಶೆಯನ್ನು ತಯಾರಿಸಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ
ಅನುಮತಿಗಾಗಿ ಹೋದಾಗ ಜಮೀನು ಪರಿವರ್ತನೆಯಾಗದಿದ್ದುದ್ದಕ್ಕಾಗಿ ಅನುಮತಿಯನ್ನು ನಿರಾಕರಿಸಲಾಯಿತು ಅಲ್ಲದೆ ಆಗತಾನೇ ಬಿ.ಡಿ.ಎ. ಅಸ್ತಿತ್ವಕ್ಕೆ ಬರುವ ದಿನಗಳಾದ್ದರಿಂದ
ಎಲ್ಲಾ ಅನುಮತಿಗಳು ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯೊಳಗೆ ಬರಲಾರಂಭಿಸಿತು. ದಿನೇ ದಿನೇ ಕಛೇರಿಯಿಂದ ವ್ಯಕ್ತಿಗಳ ನಡುವಿನ ಓಟಾಟ ಫಾದರ್
ಪೀಟರ್ರವರನ್ನು ಅಧೀರರನ್ನಾಗಿ ಮಾಡಿತ್ತಾದರೂ ಅವರಿಗೆ ಬಾಲಯೇಸುವಿನ ಮೇಲೆ ಇದ್ದಂತಹ ಪ್ರೀತಿ, ಭಕ್ತಿ, ವಿಶ್ವಾಸ ಹಾಗೂ ಸಹನೆ ಯಾವುದಕ್ಕೂ ಹಿಂಜರಿಯದೆ
ಧೈರ್ಯದಿಂದ ಮುನ್ನುಗ್ಗುವಂತೆ ಮಾಡಿತು. ಎಲ್ಲಾ ಅಡಚಣೆಗಳನ್ನು ಕಾಲಕ್ರಮೇಣವಾಗಿ
ಎದುರಿಸಿದರು. ಬಾಲಯೇಸುವಿನ ಪವಾಡದಿಂದಾಗಿಯೇ 1977ರ ಅಕ್ಟೋಬರ್ 26ರಂದು ಭೂಪರಿವರ್ತನಾ ಪತ್ರದ ಮೊದಲ ಪ್ರತಿಯೊಂದು ಪ್ರಾಧಿಕಾರದಿಂದ ಮಂಜೂರಾಯಿತು.
ಇದರ ಜೊತೆಗೆ ರೂ. 50,000.00 (ಐವತ್ತು ಸಾವಿರ ರೂಪಾಯಿಗಳು) ಅಭಿವೃದ್ಧಿ ಶುಲ್ಕವನ್ನೂ ಸರಕಾರ ವಜಾಮಾಡಿತು. ಇದುವರೆಗೂ ಯಾರಿಗೂ ದೊರೆಯದ
ಸೌಲಭ್ಯ ಇದಾಗಿತ್ತು! ಕ್ರಮೇಣ ಗುಲಾಬಿವನದ ಪ್ರದೇಶದಲ್ಲಿ ಹೊಸ ದೇವಾಲಯವನ್ನು ಕಟ್ಟಲು ಧರ್ಮಾಧ್ಯಕ್ಷರು ಅನುಮತಿಯನ್ನು ನೀಡಿದರು. ಆಶ್ಚರ್ಯಕರ
ವಿಷಯವೇನೆಂದರೆ ಈ ಘಟನೆಗಳೆಲ್ಲವೂ ನವೇನ ದಿನದ ಗುರುವಾರಗಳಂದೇ ನಡೆದವು. ದೇವಾಲಯದ ನವಕಟ್ಟಡವು ಪೂರ್ತಿಗೊಂಡಾಗ ವ್ಯಾಟಿಕನ್ ಧರ್ಮಪ್ರಚಾರ
ಸಮಿತಿಯ ಅಂದಿನ ಮುಖ್ಯ ಕಾರ್ಯದರ್ಶಿಯೂ, ಬೆಂಗಳೂರಿನ ಹಿಂದಿನ ಧರ್ಮಾಧ್ಯಕ್ಷರಾಗಿದ್ದ ವಂದನೀಯ ಡಿ.ಎಸ್. ಲೂರ್ದುಸ್ವಾಮಿಯವರಿಂದ 1979ರ ಜೂನ್
29ರಂದು ಹೊಸ ದೇವಾಲಯದ ಉದ್ಘಾಟನೆಯನ್ನು ಮಾಡಲಾಯಿತು. ನಂತರ ಬಂದ ಮಹಾಧರ್ಮಾಧ್ಯಕ್ಷರಾದ ವಂದನೀಯ ಅಲೋನ್ಸ್ ಮಥಾಯಸ್ರವರ ನೇತೃತ್ವದಲ್ಲಿ
ಬಾಲಯೇಸುವಿನ ಪ್ರತಿಮೆಯ ಮಂಟಪವನ್ನು ದೇವಾಲಯದ ಬಲಪಕ್ಕದಲ್ಲಿ ನಿರ್ಮಿಸಿ, ಅದನ್ನು 1989ರ ಜೂನ್ 22ರಂದು ಉದ್ಘಾಟಿಸಲಾಯಿತು.
ಬೃಹತ್ ಹಾಗೂ ಸುಂದರ ದೇವಾಲಯ
33 ವರ್ಷಗಳಿಂದ ಧಾರ್ಮಿಕ ಸೇವೆಯನ್ನು ನೀಡುತ್ತಾ ಅನೇಕರನ್ನು ಬಾಲಯೇಸುವಿನ ಕಡೆಗೆ ಆಕರ್ಷಿಸಿದ ಆಗಿನ ದೇವಾಲಯವು, ಬೆಳೆಯುತ್ತಿದ್ದ ಭಕ್ತಾದಿಗಳ
ಸಂಖ್ಯೆಯನ್ನು ನಿರ್ವಹಿಸಲು ಹರಸಾಹಸ ಪಡುತ್ತಿತ್ತು. ವಿಶೇಷವಾಗಿ ಗುರುವಾರಗಳಂದು ನೆರೆಯುತ್ತಿದ್ದ ಜನಸಂದಣಿ ಹಾಗೂ ಕಿಕ್ಕಿರಿಯುತ್ತಿದ್ದ ಬೀದಿಗಳಿಂದ
ಆಗುತ್ತಿದ್ದ ಅನಾನುಕೂಲಗಳನ್ನು ಅರಿತು, ವಾಹನ ನಿಲುಗಡೆ, ಮಾಹಿತಿಕೇಂದ್ರ, ಹಾಗೂ ಇತರ ಆಧುನಿಕ ಸೌಲಭ್ಯದೊಂದಿಗೆ ಬೃಹತ್ ದೇವಾಲಯದ
ನಿರ್ಮಾಣಕ್ಕೆ 2001ರಲ್ಲಿ ಯೋಜನೆಯನ್ನು ರೂಪಿಸಲಾಯಿತು. ಈಗ ಇರುವ ಬೃಹತ್ ಹಾಗೂ ಸುಂದರ ದೇವಾಲಯದ ನಿರ್ಮಾಣಕ್ಕೆ 2002ರ ಜನವರಿ
4ರಂದು ಅಂದಿನ ಮಹಾಧರ್ಮಾಧ್ಯರಾಗಿದ್ದ ವಂದನೀಯ ಇದ್ವೇಷಿಯಸ್ ಪಿಂಟೋರವರು ಶಂಕುಸ್ಥಾಪನೆ ಮಾಡಿದರು. ಬಾಲಯೇಸುವಿನ ಕೃಪಾಶೀರ್ವಾದದ
ಫಲದಿಂದ ಕಾಮಗಾರಿಯು ಶೀಘ್ರವಾಗಿ ಸಾಗುತ್ತಿದ್ದು, 2003ರ ಜನವರಿ 13ರಂದು ಬೇಸ್ಮೆಂಟ್ ಹಾಗೂ ಪೋಡಿಯಂನ ಮೊದಲ ಹಂತದ ಕೆಲಸವನ್ನು ಮುಗಿಸಿ
ಮಹಾಧರ್ಮಾಧ್ಯಕ್ಷರಾದ ಇಸ್ನೇಷಿಯಸ್ ಪಿಂಟೋರವರೇ ಆ ಭಾಗವನ್ನು ಉದ್ಘಾಟಿಸಿದರು. 2004ರ ಸೆಪ್ಟೆಂಬರ್ 17ರಂದು ಈಗಿನ ಮಹಾಧರ್ಮಾಧ್ಯಕ್ಷರು ಅಧಿಕಾರವನ್ನು
ಸ್ವೀಕರಿಸಿದ ನಂತರ ಈ ದೇವಾಲಯದ ನಿರ್ಮಾಣಕ್ಕೆ ಮಹತ್ವವನ್ನು ನೀಡಿ ಯಶಸ್ವಿಯಾಗಿ ಅದರ ಕೆಲಸವನ್ನು ಪೂರ್ಣಗೊಳಿಸಲು ಪರಿಣಾಮಕಾರಿಯಾಗಿ ದುಡಿದರು.
ಅದರ ಫಲವಾಗಿಯೇ 2005ರ ಜನವರಿ 14ರಂದು ಎಲ್ಲಾ ಕೆಲಸಗಳನ್ನು ಮುಗಿಸಿ ಉದ್ಘಾಟನೆಗೆ ತಯಾರಾಯಿತು. 2005ರ ಜೂನ್ 9ರಂದು ಅಂದಿನ ರಾಜ್ಯಪಾಲರಾಗಿದ್ದ
ಘನತೆವೆತ್ತ ಶ್ರೀ ಟಿ.ಎನ್. ಚತುರ್ವೇದಿಯವರು ಈ ದೇವಾಲಯವನ್ನು ಉದ್ಘಾಟಿಸಿದರೆ, ಕರ್ನಾಟಕದ ಎಲ್ಲಾ ಕಥೋಲಿಕ ಧರ್ಮಾಧ್ಯಕ್ಷರ ಸಮ್ಮುಖದಲ್ಲಿ ಭಾರತದಲ್ಲಿ
ರೋಂ ರಾಯಭಾರಿಯಾಗಿದ್ದ ಮಹಾಧರ್ಮಾಧ್ಯಕ್ಷ ಅತೀ ವಂದನೀಯ ಪೇದ್ರೋ ಲೊಪೆಜ್ ಕ್ವಿಂಟಾನರವರು ಆಶೀರ್ವದಿಸಿ ಲೋಕಾರ್ಪಣೆಮಾಡಿದರು. ಪವಿತ್ರ ಬಾಲಯೇಸುವನ್ನು
ಹೊಸ ದೇವಾಲಯದಲ್ಲಿ ಪ್ರತಿಷ್ಠಾಪಿಸಿರುವುದು ನಿಜವಾಗಿಯೂ ಒಂದು ಹೆಮ್ಮೆಯ ಹಾಗೂ ಸಂತಸದ ವಿಷಯ. ಆದರೆ ಅದಕ್ಕಿಂತಲೂ ಹೆಚ್ಚಿನ ಹೆಮ್ಮೆಯ ವಿಷಯವೆಂದರೆ,
ಅವರನ್ನು ನಮ್ಮ ಹೃನ್ಮನಗಳಲ್ಲಿ ಪ್ರೀತಿ ವಿಶ್ವಾಸದಿಂದ ಪ್ರತಿಷ್ಟಾಪಿಸುವುದೇ ಆಗಿದೆ. ಹೀಗೆ ಬಾಲಯೇಸುವನ್ನು ಸ್ವೀಕರಿಸಿದಾಗ, “ನನ್ನನ್ನು ಎಷ್ಟು ಹೆಚ್ಚಾಗಿ ಗೌರವಿಸುತ್ತೀರೋ
ಅಷ್ಟು ಹೆಚ್ಚಾಗಿ ನಿಮ್ಮನ್ನು ಹರಸುತ್ತೇನೆ" ಎಂಬ ಮಾತುಗಳನ್ನು ಸ್ವಂತ ಅನುಭವದಿಂದ ಎಲ್ಲರೂ ಗ್ರಹಿಸಬಹುದು.
ಬಲಿಪೂಜೆಯಲ್ಲಿ ಭಾಗವಹಿಸುವುದರಿಂದ ಪವಿತ್ರ ಬಾಲಯೇಸುವಿಗೆ ಹೆಚ್ಚಿನ ಗೌರವ ಮಹಿಮೆ ಉಂಟಾಗುತ್ತದೆ. ಗುರುವಾರಗಳಲ್ಲಿಯಾದರೂ ಅವರನ್ನು ಭೇಟಿಮಾಡಿ ನವೇನ
\ಪ್ರಾರ್ಥನೆಗಳನ್ನು ಹೇಳುವುದು, ವಾರ್ಷಿಕ ಮಹೋತ್ಸವವನ್ನು ಒಂಭತ್ತು ದಿನಗಳ ಸಿದ್ಧತೆಯೊಂದಿಗೆ [ಜನವರಿ 5ರಿಂದ 14ನೇ ತಾರೀಖಿನವರೆಗೆ] ಕೊಂಡಾಡುವ ಆಧ್ಯಾತ್ಮಿಕ
ಕಾರ್ಯಕ್ರಮಗಳು ಅತ್ಯಂತ ಫಲದಾಯಕವಾದ ಕಾರ್ಯವಾಗಿದೆ. ಪವಿತ್ರ ಬಾಲಯೇಸುವನ್ನು ನಿಮ್ಮ ಮನದಲ್ಲಿ ಪೂಜಿಸಿರಿ: ಅನಂತ ಕೃಪೆಯೂ, ಶಾಂತಿಯೂ ನಿಮಗೆ ಲಭಿಸುವುದು.