Stella Mary
Bangalore
CHURCH
Nullam dignissim, ante scelerisque the is euismod fermentum odio sem semper the is erat, a feugiat leo urna eget eros. Duis Aenean a imperdiet risus.
ನೇರ ಪ್ರಸಾರ
ಬಾಲಯೇಸು ಪುಣ್ಯಕ್ಷೇತ್ರದ ವಿವೇಕನಗರ
ಬೆಂಗಳೂರಿನ ಅವಿಭಜಿತ ಪವಿತ್ರಹೃದಯ ಧರ್ಮಕೇಂದ್ರ ಬಹಳ ವಿಶಾಲವಾಗಿದ್ದು, ಸೊಣ್ಣನಹಳ್ಳಿ (ವಿವೇಕನಗರ), ವಣ್ಣಾರ್ಪೇಟೆ, ನೀಲಸಂದ್ರ,
ಆಸ್ಟಿನ್ನಗರ ಬಡಾವಣೆ, ಆನೆಪಾಳ್ಯ ಬಡಾವಣೆ, ಈಜಿಪುರ ಮುಂತಾದ ಅನೇಕ ಸ್ಥಳಗಳನ್ನು ಮತ್ತು ಬಡಾವಣೆಗಳನ್ನು ಒಳಗೊಂಡಿತ್ತು. ಇಷ್ಟು
ವಿಶಾಲವಾದ ಧರ್ಮಕೇಂದ್ರವನ್ನು ವಿಂಗಡಿಸಿದರೆ ಜನತೆಗೆ ಸೌಕರ್ಯಗಳನ್ನು ನೀಡುವುದರ ಜೊತೆಗೆ ಧರ್ಮಕೇಂದ್ರದ ಗುರುಗಳಿಗೆ ಕಾರ್ಯನಿರ್ವಹಣೆಯೂ
ಸುಲಭವಾಗುವುದೆಂದು ತಿಳಿದು, ಆಗಿನ ಧರ್ಮಕೇಂದ್ರದ ಗುರುಗಳಾಗಿದ್ದ ಫಾದರ್ ಪೌಲ್ ಕಿನಾತ್ತುಕರ ಎಂಬುವವರು ಹೊಸ ಧರ್ಮಕೇಂದ್ರಕ್ಕಾಗಿ ಸ್ಥಳವನ್ನು
ಹುಡುಕಲಾರಂಭಿಸಿದರು. ಬಹಳ ಕಾಲ ಅವರ ಪ್ರಯತ್ನ ಸಫಲವಾಗಲಿಲ್ಲ. ಆಗ ತಮ್ಮ ಸ್ನೇಹಿತ ಗುರುವೊಬ್ಬರ ಸಲಹೆಯಂತೆ ಪ್ರಾಗ್ನ ಬಾಲಯೇಸುವಿನಲ್ಲಿ
ಭಕ್ತಿಯಿಂದ ಪ್ರಾರ್ಥಿಸಲು ಆರಂಭಿಸಿದರು. ಬೇಗನೇ, ಅವರ ಪ್ರಾರ್ಥನೆಗೆ ಫಲವೆಂಬಂತೆ, 1969ರಲ್ಲಿ ಸೊಣ್ಣನಹಳ್ಳಿಯಲ್ಲಿ (ಈಗಿನ ವಿವೇಕನಗರ)
ಸುಮಾರು ನಾಲ್ಕೂವರೆ ಎಕರೆಯಷ್ಟು (ಸುಮಾರು 1,96,000 ಚದರ ಅಡಿ) ಸುಂದರವಾದ ಬೇಸಾಯದ ಜಮೀನನ್ನು ಬಾಲಯೇಸುವೇ ಅನುಗ್ರಹಿಸಿದರು.
ಆಗಿನ ಮಹಾಧರ್ಮಾಧ್ಯಕ್ಷರಾಗಿದ್ದ ಅತೀ ವಂದನೀಯ ಲೂರ್ದುಸ್ವಾಮಿಯವರು 1969ರ ಏಪ್ರಿಲ್ 8ರಂದು ಹೊಸ ಧರ್ಮಕೇಂದ್ರದ ಕಟ್ಟಡವನ್ನು
ಕಟ್ಟಲು ಶಂಕುಸ್ಥಾಪನೆಯನ್ನು ನೆರವೇರಿಸಿದರು.
ಧರ್ಮಕೇಂದ್ರದ ಗುರುಗಳು
ಧರ್ಮಕೇಂದ್ರದ ಸಹಾಯಕ ಗುರುಗಳು
ಸಿಬ್ಬಂದಿ ಗುರುಗಳು
ನಿರ್ವಾಹಕರು
ಶಾಲೆ ವ್ಯವಸ್ಥಾಪಕರು
ಅದ್ಭುತಶಾಲಿಯಾದ ಬಾಲಯೇಸುವೇ, ನಾವು ನಿಮ್ಮ ಪ್ರತಿಮೆಯ ಮುಂದೆ ಸಾಷ್ಟಾಂಗವಾಗಿ ಅಡ್ಡಬಿದ್ದು,
ನಿಮ್ಮ ಸಹಾಯವನ್ನು ಯಾಚಿಸುತ್ತೇವೆ. ನೊಂದಿರುವ ನಮ್ಮ ಹೃನ್ಮನಗಳ ಮೇಲೆ ನಿಮ್ಮ ಕೃಪಾಕಟಾಕ್ಷವನ್ನು ಇರಿಸಿರಿ. ಪ್ರೀತಿಮಯ
ಹಾಗೂ ಕರುಣಾಭರಿತ ಹೃದಯವುಳ್ಳ ನೀವು ನಮ್ಮ ದೀನ ಪ್ರಾರ್ಥನೆಗಳೆಂದ ಮನಕರಗಿ ನಾವು ಭಕ್ತಿಯಿಂದ ಕೋರುವ ವರಗಳನ್ನು ದಯಪಾಲಿಸಿರಿ
(ವೈಯಕ್ತಿಕ ಕೋರಿಕೆಗಳನ್ನು ಇಲ್ಲಿ ನಿವೇದಿಸಬಹುದು)
ನಮಗೆ ಉಂಟಾಗಿರುವ ಅಧೈರ್ಯವನ್ನು ತೊಲಗಿಸಿರಿ, ನಮಗೆ ಬಂದೊದಗಿರುವ ಕಷ್ಟ ಕಾರ್ಪಣ್ಯಗಳನ್ನು ದೂರಮಾಡಿರಿ. ನಿಮ್ಮ ಪವಿತ್ರ ಬಾಲ್ಯದ
ನಿಮಿತ್ತ ನಮ್ಮ ಪ್ರಾರ್ಥನೆಗಳನ್ನು ಆಲಿಸಿ ಉಪಕಾರವನ್ನೂ ಉಪಶಮನವನ್ನೂ ನೀಡಿರಿ. ನಿಮ್ಮ ಸಹಾಯವನ್ನು ಪಡೆದು ಧನ್ಯರಾದ ನಾವು
ಪಿತನೊಂದಿಗೂ ಪವಿತ್ರಾತ್ಮರೊಂದಿಗೂ ಸದಾ ಕಾಲಕ್ಕೂ ನಿಮ್ಮನ್ನು ಸ್ತುತಿಸುವೆವು. ಆಮೆನ್.
ಅಂಚೆ ಪೆಟ್ಟಿಗೆ. 4712 ವಿವೇಕನಗರ, ಬೆಂಗಳೂರು - 560 047 ಕರ್ನಾಟಕ, ಭಾರತ
ದೂರವಾಣಿ ಸಂಖ್ಯೆ:080 2530 1206 / 080 2530 4110
ಇಮೇಲ್: ijsvnagarblr47@rediffmail.com / ijsvnagarblr47@yahoo.com